ಮಂದಾಕಿನಿ ತ್ರಿವೇದಿ ಒಬ್ಬ ಭಾರತೀಯ ನೃತ್ಯಗಾರ್ತಿ. ಮೋಹಿನಿಯಾಟ್ಟಂ ಶಾಸ್ತ್ರೀಯ ನೃತ್ಯದಲ್ಲಿ ಅವರ ಕೊಡುಗೆಗಾಗಿ ೨೦೧೫ ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ತ್ರಿವೇದಿ ಅವರು ನಳಂದ ನೃತ್ಯಕಲಾ ಮಹಾವಿದ್ಯಾಲಯದಿಂದ ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. == ವೃತ್ತಿ == ತ್ರಿವೇದಿಯವರು ಹನ್ನೆರಡು ವರ್ಷಗಳ ಕಾಲ ನಳಂದ ನೃತ್ಯಕಲಾ ಮಹಾವಿದ್ಯಾಲಯದಲ್ಲಿ ಒರ್ವ ಭಾರತೀಯ ನೃತ್ಯದ ಪ್ರಾಧ್ಯಾಪಕರಾಗಿದ್ದರು. ಅವರು ೨೦೦೭ ಮತ್ತು ೨೦೦೮ ರಲ್ಲಿ ಕಲಾನ್ ಘೋಡಾ ಕಲಾ ಉತ್ಸವದ ಮೇಲ್ವಿಚಾರಕರಾಗಿದ್ದರು. ಇವರು ಮೋಹಿನಿಯಾಟ್ಟಂನಲ್ಲಿ ತರಬೇತಿ ಪಡೆದಿದ್ದಾರೆ.. == ಪ್ರಶಸ್ತಿಗಳು == ೨೦೧೫ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕೇಂದ್ರ ಸರ್ಕಾರದ ಜೂನಿಯರ್ ಫೆಲೋಶಿಪ್ == ಉಲ್ಲೇಖಗಳು ==